ಅಬ್ಬಾಸಿಯಾದ ನಮ್ಮ ಫ್ಲಾಟ್ ನ ಎದುರುಗಡೆ ಪ್ಲಾಟ್ ಗೆ ಹೊಸದಾಗಿ ತಮಿಳು ಕ್ರಿಶ್ಚಿಯನ್ ಕುಟುಂಬ ಕಳೆದ ತಿಂಗಳು ವಾಸಕ್ಕೆ ಬಂದಿತ್ತು .ಒಬ್ಬ ಪಾಸ್ಟೆರ್, ಅವನ ಹೆಂಡತಿ , ಇಬ್ಬರು ಹೆಣ್ಣು ಮಕ್ಕಳು ಏಂಜಲ್ ಮತ್ತು ಅಭೀಷಾ ಹಾಗೂ ಹೆಂಡತಿಯ ಸೋದರ ... ಬಂದ ಒಂದೆರಡು ದಿನದಲ್ಲೇ ನಮ್ಮ ಪರಿಚಯ ಸಾಧ್ಯವಾಯಿತು. ಅವರಿಗೆ ಸೂಕ್ತಸಲಹೆಗಳನ್ನು ನೀಡುತ್ತ ಇದ್ದೆವು.. ಆ ಮನೆಯೊಡತಿಯೊಂದಿಗೆ ನಮ್ಮ ಪರಿಚಯ ಸ್ವಲ್ಪ ಹತ್ತಿರವಾಗುತ್ತಿದ್ದಂತೆಯೇ ನಾವು ೮ ತಿಂಗಳ ಮಗು ಅಭೀಷಾಳನ್ನು ಸಮಯ ಇದ್ದಾಗ ನಮ್ಮ ಮನೆಗೂ ಕಳಿಸಲು ಕೇಳಿದ್ದೆವು . ಅವರ ಮನೆಯಲ್ಲಿ ಟಿವಿ ಇರಲಿಲ್ಲವಾದ್ದರಿಂದ ದೊಡ್ಡ ಹುಡುಗಿ ಏಂಜಲ್ ಮಗುವನ್ನು ಕರಕೊಂಡು ನಮ್ಮ ರೂಮ್ಗೆ ಬರುತ್ತಿದ್ದಳು ... ಮೊದಲ ದಿನವಂತೂ ನಮಗೆ ಖುಷಿಯೋ ಖುಷಿ ... ಎಷ್ಟೋ ಸಮಯದ ಬಳಿಕ ಮಗುವೊಂದನ್ನು ಎದೆಗಾನಿಸಿ ಹಿಡಿದಿದ್ದೆವು... ನಾನು,ನನ್ನ ಹಬ್ಬಿ ಮತ್ತು ಶೇರಿಂಗ್ನಲ್ಲಿ ನಮ್ಮೊಂದಿಗೆ ಇರುವ ವೆಂಕಟೇಶ್ , ಶೋಭಾ ಅವರಿಗೂ ಬಲು ಖುಷಿಯಾಗಿತ್ತು. ಆ ದಿನ ಆ ಪುಟ್ಟ ಮಗು ನಮಗೆ ನೀಡಿದ ಸಂಭ್ರಮ ನಾನು ಇನ್ನೂ ಮರೆಯಲಾರೆ, ನೆನಪಿನಾಳಕ್ಕೆ ಹೋಗಿ ಹುದುಗಿದರೆ ಮಧುರ ಕ್ಷಣಗಳನ್ನು ಬೇರೆ ಯಾವುದೇ ವಿಷಯದಿಂದ ಪುನರ್ರಚಿಸಲು ಆಗುವುದಿಲ್ಲ .
ನಿಜ ಮಕ್ಕಳು ಪ್ರಕೃತಿಯ ತುಂಬಾ ಸುಂದರವಾದ ಪ್ರಕೃತಿಯ ಕೃತಿಗಳು. ಎಲ್ಲ ಮಕ್ಕಳೂ ಚಂದ.. ಮಕ್ಕಳು ನಗುತ್ತ ಇದ್ದರೆ ಎಷ್ಟು ಅಂದ! ಸಾಕ್ಷಾತ್ ಭಗವಂತನು ವೇಷ ಮರೆಸಿ ಮಡಿಲಲ್ಲಿ ನಿಂದು ಕೈಕಾಲು ಆಡುವಂತೆ ಒಂದು ಭಾಸ. ಎಂತಹಾ ಕಟುಕ ಮನಸನ್ನು ಗೆಲ್ಲಿಸಿ ಶರಣಾಗಿಸುವ ಮೋಹಕ ಮೃದು ಮನಸ್ಸು !!! ನಿಜವಾಗಲೂ ಅದ್ಭುತ ! ಮಗುವನ್ನು ಕಂಡಾಗ ಈ ಸೃಷ್ಟಿ ಅದೆಷ್ಟು ಸೌಂದರ್ಯದ ವಿಶಾಲ ಉದ್ಯಾನ... ಅದೆಷ್ಟು ಕ್ರಿಯಾಶೀಲ ಅಂತರಂಗ ಬೆಸುಗೆ.. ನೋವುತಣಿಸುವ ಅಪರಿಮಿತ ಜೀವಜಲಧನ.. ಬದುಕಿನ ಮುನ್ನಡೆಗೆ ಅರಿವಿಗೆ ಬರದ ಸಾವಿರದೊಂದು ಪ್ರೇರಣೆ!!!
ಹುಂ! ಆ ಮಗು ಯಾರದೋ ಏನೋ.. ಆದರೆ ನಮ್ಮ ಮನೆಯಂಗಳದಲ್ಲಿ ಸಂತಸದ ಮಳೆ ಸುರಿಸಿದ ಬಾನು. ನಮ್ನಮ್ಮದೇ ವ್ಯವಹಾರದಲ್ಲಿ ಮುಳುಗಿದ್ದವರಿಗೆ ಇದೆಲ್ಲಾ ಬಿಟ್ಟು ಇನ್ನೂ ಇದೆ ನಾನಾ ಕಡೆ ನೋಡಿ ನಗುನಗತಾ ಇರಿ ಎಂದು ಮರೆತ ನಗುವನ್ನು ಮತ್ತೆ ತಂದುಕೊಟ್ಟ ದೇವಕನ್ಯೆ! ಮಕ್ಕಳ ವಿನೋದದ ಗುಂಗನ್ನು ಸವಿಯುವ ಮೌನ ಹೃದಯಗಳಿಗೆ ಯಾರ ಮಗುವೂ ಬೇರೆಯದಲ್ಲ... ನಮ್ಮ ಮಗುವಷ್ಟೇ ಕಾಳಜಿ ಪ್ರೀತಿ ಅದೆಲ್ಲಿಂದ ಸುರಿಸುರಿದು ಬರುತ್ತದೋ ನನಗೆ ತಿಳಿಯದು. ಎಷ್ಟೋ ಬಾರಿ ಅವಳನ್ನು ತಟ್ಟಿ ನಿದ್ದೆ ಮಾಡಿಸಿ ಮನೆಗೆ ಕಳಿಸಿದುದುಂಟು . ಅಭಿಷಾ ಅಂತೂ ನಮ್ಮೆಲ್ಲರ ಮನದ ಶಾಶ್ವತ ನಿವಾಸಿ. ನಮಗವರ ಭಾಷೆ ಬರದಿದ್ದರೂ ಮೂಕವಾಗಿ ಸಂವಹನ ಮಾಡುತ್ತೇವೆ.. ಅಭೀಷಾಗೆ ನಮ್ಮ ಟಿವಿಯ 'ಕುಡಲಾ ತೆಲಿಪುಗ' ಶೀರ್ಷಿಕೆ ಗೀತೆಯ 'ಚಂದ ಉಂಟಲ್ಲ' ಅನ್ನುವ ಪದ ಬಹಳ ಬಹಳ ಇಷ್ಟ ಅವಳ ಭಾಷೆ ಅರಿಯದ ನಾವು ಈ ಪದ ತುಸು ಸ್ವರ ನೀಡಿ ಹೇಳಿದರೆ ಬಾಯಗಲ ನಗುತ್ತಾಳೆ.ಬೇರೇನೆ ಅಂದರೂ ತನ್ನದೇ ಮುಗ್ಧ ಕಾರ್ಯಕಲಾಪದಲ್ಲಿ ವಿಹರಿಸುತ್ತಾ ನಮ್ಮ ಗೊಡ್ಡುತನವನ್ನು(!!) ಆ ಮುದ್ದುಕಂದ ಕೇವಲ ನಮ್ಮ ಕಣ್ಣುಗಳನ್ನು ಓದಿ ಅರ್ಥ ಮಾಡಿಕೊಳ್ಳುತ್ತಾಳೆ . ಮಕ್ಕಳೇ ಹಾಗೆ ಅವರಿಚ್ಛೆಗೆ ವಿರುದ್ಧವಾದರೆ ನಮ್ಮ ಮೂತಿಗೆ ಒದೆಯುವಂತೆ ಬಿಡುತ್ತಾರೆ ತಮ್ಮ ಅಳುವೆಂಬ ಅತಿದೊಡ್ಡ ಪ್ರಬಲ ಬ್ರಹ್ಮಾಸ್ತ್ರ !! .ಆಸ್ಪತ್ರೆಯಲ್ಲಾದರೆ sevoflurane ಮೂಸಿಸಿಯೋ ಇಲ್ಲವೇ paracetamol ಗೆ midazolam ಸೇರಿಸಿ ಮಲಗಿಸಿಬಿಡುತ್ತೇವೆ. ಮನೆಯಲ್ಲಿ ಹಾಗೆ ಮಾಡಲು ಬರದು ಹಾಗಾಗಿ ಈ ಯುದ್ಧದಿಂದ ಯಾರೂ ಸುಲಭದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. !
ನಿನ್ನೆ ನಮ್ಮೊಂದಿಗೆ ಆದದ್ದೂ ಅದೇ . ಸುಮಾರು ದಿನಗಳಿಂದ ಜ್ವರ ಹಾಗು ಶೀತ ಕಫ಼ ದೋಷದಿಂದ ಅಭೀಷಾ ಅರೋಗ್ಯ ಕೆಟ್ಟಿತ್ತು . ನಮ್ಮ ಮನೆಗೆ ಬಂದಿರಲಿಲ್ಲ . ನಿನ್ನೆ ಸಂಜೆ ಅವರಮ್ಮ ಅಪ್ಪ ತುರ್ತುಕಾರ್ಯಕ್ಕಾಗಿ ಮನೆಯಿಂದ ಹೊರಹೋಗಬೇಕಾಯಿತು. ಅರ್ಧ ಗಂಟೆ ಮಕ್ಕಳನ್ನು ನಮ್ಮ ಮನೆಗೆ ಬಿಟ್ಟಿದ್ದರು . ಅವರತ್ತ ಹೋಗುತ್ತಲೇ ಅಭೀಷಾ ಆಳುವುದಕ್ಕೆ ಪ್ರಾರಂಭ ಮಾಡಿದಳು . ಎಷ್ಟೇ ಸಮಾಧಾನ ಮಾಡಿದರೂ ೧ ಗಳಿಗೆ ಸುಮ್ಮನಿರಲಿಲ್ಲ . ಇಷ್ಟು ದಿವಸದಿಂದ ಅಳು ಅಂದರೆ ಏನೆಂದೇ ಅರಿಯದಂತೆ ನಗುತಲಿದ್ದ ಮಗು ಇವತ್ತು ಯಾಕೆ ಹೀಗೆ ಮಾಡುತ್ತಿದೆ? ಗೋಡೆ ತುಂಬಾ ಅಂಟಿಸಿದ್ದ ಮಕ್ಕಳ ಫೋಟೋ ಕಂಡು ಮಂತ್ರಮುಗ್ಧವಾಗುತ್ತಿದ್ದ ಮಗು ಅಂದು ರಚ್ಚೆ ಹಿಡಿದು ಅಳುತ್ತಿತ್ತು. ಶೀತ ಇನ್ನೂ ಗುಣವಾಗದ ಕಾರಣ ಅದರ ಮೂಗು ಕಟ್ಟಿ ಹೋಗಿತ್ತು . ಉಸಿರಾಡಲು ಕಷ್ಟವಾಗುತ್ತಿತ್ತು . ಎಲ್ಲಕಿಂತ ಹೆಚ್ಚಾಗಿ ಅಮ್ಮನನ್ನು miss ಮಾಡಿಕೊಳ್ಳುತ್ತಿತ್ತು . ನಾವು ಏನೇ ಪ್ರಯತ್ನ ಮಾಡಿದರು ಸುಮ್ಮನಿರಿಸಲಾಗಲಿಲ್ಲ... ಪುಟ್ಟ ಪುಟ್ಟ ಕಣ್ಣುಗಳಲ್ಲಿ ಕುಂಭದ್ರೋಣ ಮಳೆಯಂತೆ ಸುರಿಯಿತು ಕಣ್ಣೀರು . ತಟ್ಟಿ ಮಲಗಿಸಲು ನೋಡಿದೆ , ಉಸಿರಾಡಲು, ಅಳಲು, ಉಗುಳು ನುಂಗಲು ಸಾಧ್ಯವಾಗದೆ ಯಾತನೆಯನ್ನು ಪಡುತ್ತಿತ್ತು.. ನಮಗೋ ಏನು ಮಾಡಲೂ ಗೊತ್ತಾಗಲಿಲ್ಲ. ನಾನು ಸಾಧ್ಯವಾದಷ್ಟು ಮೂಗೊರೆಸಿ ಮುಖ ಒರೆಸಿ ಸಮಾಧಾನ ಮಾಡಿದರು ಸರಿಕಾಣಲಿಲ್ಲ. drops ಏನಾದರು ಇದೆಯೇ ನೋಡಿದೆ ಸಿಗಲಿಲ್ಲ. ಮಗುವನ್ನು ಸುಮ್ಮನಿರಿಸಲು ನನ್ನ ಹಬ್ಬಿ ಕೂಡಾ ಮಾಡಿದ ಪ್ರಯತ್ನ ವಿಫ಼ಲವಾಯಿತು .
ಸಂಜೆ ೭ ಗಂಟೆಗೆ ಅವರಮ್ಮ ಬಂದರು. ಅಮ್ಮನನ್ನು ಕಾಣುತ್ತಲೇ ಗಪಚುಪ್. ಅಮ್ಮನ ಭುಜವೇರಿ ಅಳುವು ನಿಂತು ನಗು ಮೂಡಿ ಅವಳನ್ನು ಸಮಾಧಾನ ಮಾಡಲು ಸಲ್ಲದ ಮಂಗಚೇಷ್ಟೆಮಾಡುತ್ತ ನಿಂತವರತ್ತ ನೆತ್ತನೋಟ ನೆಟ್ಟಂತೆಯೇ ನೋಡುತ್ತಾ ಮನೆ ಸೇರಿದಳು . ಟಾಟಾ ಎಂದು ಕೈಯ್ಯಾಡಿಸಿ ಯಥಾಸ್ಥಿತಿಗೆ ಮರಳಲೆತ್ನಿಸಿದೆವು . ಮತ್ತೆ ಮತ್ತೆ ಅವಳ ಮುಖ ಕಣ್ಣ ಮುಂದೆ ಬರುತ್ತಿತ್ತು. ರಾತ್ರೆಯೆಲ್ಲ ಅವಳದೇ ಮಾತು ಕನಸು. ಅರ್ಧ ಗಂಟೆ ಅವಳನ್ನು ಸರಿಯಾಗಿ ನೋಡಲಿಕ್ಕೆ ಆಗಿಲ್ಲ. ಆದರೆ ಅಮ್ಮ ಬಂದಾಕ್ಷಣ ಅವಳ ಮನಸ್ಸು ಹೇಗೆ secure feel ಮಾಡಿಕೊಂಡಿತು.. ಅಮ್ಮನ ಬರವು ಹೇಗೆ ತಿಳಿಯಿತು. ಎಲ್ಲ ದುಗುಡ ಅಮ್ಮನನ್ನು ಕಂಡಾಗ ಹೇಗೆ ದೂರವಾಯಿತು.. ಈ ಅಮ್ಮ ಮಗುವಿನ ಬಂಧ ವರ್ಣನಾಮಯ .. ಎಷ್ಟು ವರ್ಣಿಸಿದರೂ ಸಾಲದು .. ನನಗೂ... ಒಮ್ಮೆ ಮಗುವಂತೆ ಅಮ್ಮನ ಮಡಿಲು ಸೇರುವ ತವಕವಾಯಿತು ....
- ಕಾವ್ಯಮಯಿ
ನಿಜ ಮಕ್ಕಳು ಪ್ರಕೃತಿಯ ತುಂಬಾ ಸುಂದರವಾದ ಪ್ರಕೃತಿಯ ಕೃತಿಗಳು. ಎಲ್ಲ ಮಕ್ಕಳೂ ಚಂದ.. ಮಕ್ಕಳು ನಗುತ್ತ ಇದ್ದರೆ ಎಷ್ಟು ಅಂದ! ಸಾಕ್ಷಾತ್ ಭಗವಂತನು ವೇಷ ಮರೆಸಿ ಮಡಿಲಲ್ಲಿ ನಿಂದು ಕೈಕಾಲು ಆಡುವಂತೆ ಒಂದು ಭಾಸ. ಎಂತಹಾ ಕಟುಕ ಮನಸನ್ನು ಗೆಲ್ಲಿಸಿ ಶರಣಾಗಿಸುವ ಮೋಹಕ ಮೃದು ಮನಸ್ಸು !!! ನಿಜವಾಗಲೂ ಅದ್ಭುತ ! ಮಗುವನ್ನು ಕಂಡಾಗ ಈ ಸೃಷ್ಟಿ ಅದೆಷ್ಟು ಸೌಂದರ್ಯದ ವಿಶಾಲ ಉದ್ಯಾನ... ಅದೆಷ್ಟು ಕ್ರಿಯಾಶೀಲ ಅಂತರಂಗ ಬೆಸುಗೆ.. ನೋವುತಣಿಸುವ ಅಪರಿಮಿತ ಜೀವಜಲಧನ.. ಬದುಕಿನ ಮುನ್ನಡೆಗೆ ಅರಿವಿಗೆ ಬರದ ಸಾವಿರದೊಂದು ಪ್ರೇರಣೆ!!!ಹುಂ! ಆ ಮಗು ಯಾರದೋ ಏನೋ.. ಆದರೆ ನಮ್ಮ ಮನೆಯಂಗಳದಲ್ಲಿ ಸಂತಸದ ಮಳೆ ಸುರಿಸಿದ ಬಾನು. ನಮ್ನಮ್ಮದೇ ವ್ಯವಹಾರದಲ್ಲಿ ಮುಳುಗಿದ್ದವರಿಗೆ ಇದೆಲ್ಲಾ ಬಿಟ್ಟು ಇನ್ನೂ ಇದೆ ನಾನಾ ಕಡೆ ನೋಡಿ ನಗುನಗತಾ ಇರಿ ಎಂದು ಮರೆತ ನಗುವನ್ನು ಮತ್ತೆ ತಂದುಕೊಟ್ಟ ದೇವಕನ್ಯೆ! ಮಕ್ಕಳ ವಿನೋದದ ಗುಂಗನ್ನು ಸವಿಯುವ ಮೌನ ಹೃದಯಗಳಿಗೆ ಯಾರ ಮಗುವೂ ಬೇರೆಯದಲ್ಲ... ನಮ್ಮ ಮಗುವಷ್ಟೇ ಕಾಳಜಿ ಪ್ರೀತಿ ಅದೆಲ್ಲಿಂದ ಸುರಿಸುರಿದು ಬರುತ್ತದೋ ನನಗೆ ತಿಳಿಯದು. ಎಷ್ಟೋ ಬಾರಿ ಅವಳನ್ನು ತಟ್ಟಿ ನಿದ್ದೆ ಮಾಡಿಸಿ ಮನೆಗೆ ಕಳಿಸಿದುದುಂಟು . ಅಭಿಷಾ ಅಂತೂ ನಮ್ಮೆಲ್ಲರ ಮನದ ಶಾಶ್ವತ ನಿವಾಸಿ. ನಮಗವರ ಭಾಷೆ ಬರದಿದ್ದರೂ ಮೂಕವಾಗಿ ಸಂವಹನ ಮಾಡುತ್ತೇವೆ.. ಅಭೀಷಾಗೆ ನಮ್ಮ ಟಿವಿಯ 'ಕುಡಲಾ ತೆಲಿಪುಗ' ಶೀರ್ಷಿಕೆ ಗೀತೆಯ 'ಚಂದ ಉಂಟಲ್ಲ' ಅನ್ನುವ ಪದ ಬಹಳ ಬಹಳ ಇಷ್ಟ ಅವಳ ಭಾಷೆ ಅರಿಯದ ನಾವು ಈ ಪದ ತುಸು ಸ್ವರ ನೀಡಿ ಹೇಳಿದರೆ ಬಾಯಗಲ ನಗುತ್ತಾಳೆ.ಬೇರೇನೆ ಅಂದರೂ ತನ್ನದೇ ಮುಗ್ಧ ಕಾರ್ಯಕಲಾಪದಲ್ಲಿ ವಿಹರಿಸುತ್ತಾ ನಮ್ಮ ಗೊಡ್ಡುತನವನ್ನು(!!) ಆ ಮುದ್ದುಕಂದ ಕೇವಲ ನಮ್ಮ ಕಣ್ಣುಗಳನ್ನು ಓದಿ ಅರ್ಥ ಮಾಡಿಕೊಳ್ಳುತ್ತಾಳೆ . ಮಕ್ಕಳೇ ಹಾಗೆ ಅವರಿಚ್ಛೆಗೆ ವಿರುದ್ಧವಾದರೆ ನಮ್ಮ ಮೂತಿಗೆ ಒದೆಯುವಂತೆ ಬಿಡುತ್ತಾರೆ ತಮ್ಮ ಅಳುವೆಂಬ ಅತಿದೊಡ್ಡ ಪ್ರಬಲ ಬ್ರಹ್ಮಾಸ್ತ್ರ !! .ಆಸ್ಪತ್ರೆಯಲ್ಲಾದರೆ sevoflurane ಮೂಸಿಸಿಯೋ ಇಲ್ಲವೇ paracetamol ಗೆ midazolam ಸೇರಿಸಿ ಮಲಗಿಸಿಬಿಡುತ್ತೇವೆ. ಮನೆಯಲ್ಲಿ ಹಾಗೆ ಮಾಡಲು ಬರದು ಹಾಗಾಗಿ ಈ ಯುದ್ಧದಿಂದ ಯಾರೂ ಸುಲಭದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. !
ನಿನ್ನೆ ನಮ್ಮೊಂದಿಗೆ ಆದದ್ದೂ ಅದೇ . ಸುಮಾರು ದಿನಗಳಿಂದ ಜ್ವರ ಹಾಗು ಶೀತ ಕಫ಼ ದೋಷದಿಂದ ಅಭೀಷಾ ಅರೋಗ್ಯ ಕೆಟ್ಟಿತ್ತು . ನಮ್ಮ ಮನೆಗೆ ಬಂದಿರಲಿಲ್ಲ . ನಿನ್ನೆ ಸಂಜೆ ಅವರಮ್ಮ ಅಪ್ಪ ತುರ್ತುಕಾರ್ಯಕ್ಕಾಗಿ ಮನೆಯಿಂದ ಹೊರಹೋಗಬೇಕಾಯಿತು. ಅರ್ಧ ಗಂಟೆ ಮಕ್ಕಳನ್ನು ನಮ್ಮ ಮನೆಗೆ ಬಿಟ್ಟಿದ್ದರು . ಅವರತ್ತ ಹೋಗುತ್ತಲೇ ಅಭೀಷಾ ಆಳುವುದಕ್ಕೆ ಪ್ರಾರಂಭ ಮಾಡಿದಳು . ಎಷ್ಟೇ ಸಮಾಧಾನ ಮಾಡಿದರೂ ೧ ಗಳಿಗೆ ಸುಮ್ಮನಿರಲಿಲ್ಲ . ಇಷ್ಟು ದಿವಸದಿಂದ ಅಳು ಅಂದರೆ ಏನೆಂದೇ ಅರಿಯದಂತೆ ನಗುತಲಿದ್ದ ಮಗು ಇವತ್ತು ಯಾಕೆ ಹೀಗೆ ಮಾಡುತ್ತಿದೆ? ಗೋಡೆ ತುಂಬಾ ಅಂಟಿಸಿದ್ದ ಮಕ್ಕಳ ಫೋಟೋ ಕಂಡು ಮಂತ್ರಮುಗ್ಧವಾಗುತ್ತಿದ್ದ ಮಗು ಅಂದು ರಚ್ಚೆ ಹಿಡಿದು ಅಳುತ್ತಿತ್ತು. ಶೀತ ಇನ್ನೂ ಗುಣವಾಗದ ಕಾರಣ ಅದರ ಮೂಗು ಕಟ್ಟಿ ಹೋಗಿತ್ತು . ಉಸಿರಾಡಲು ಕಷ್ಟವಾಗುತ್ತಿತ್ತು . ಎಲ್ಲಕಿಂತ ಹೆಚ್ಚಾಗಿ ಅಮ್ಮನನ್ನು miss ಮಾಡಿಕೊಳ್ಳುತ್ತಿತ್ತು . ನಾವು ಏನೇ ಪ್ರಯತ್ನ ಮಾಡಿದರು ಸುಮ್ಮನಿರಿಸಲಾಗಲಿಲ್ಲ... ಪುಟ್ಟ ಪುಟ್ಟ ಕಣ್ಣುಗಳಲ್ಲಿ ಕುಂಭದ್ರೋಣ ಮಳೆಯಂತೆ ಸುರಿಯಿತು ಕಣ್ಣೀರು . ತಟ್ಟಿ ಮಲಗಿಸಲು ನೋಡಿದೆ , ಉಸಿರಾಡಲು, ಅಳಲು, ಉಗುಳು ನುಂಗಲು ಸಾಧ್ಯವಾಗದೆ ಯಾತನೆಯನ್ನು ಪಡುತ್ತಿತ್ತು.. ನಮಗೋ ಏನು ಮಾಡಲೂ ಗೊತ್ತಾಗಲಿಲ್ಲ. ನಾನು ಸಾಧ್ಯವಾದಷ್ಟು ಮೂಗೊರೆಸಿ ಮುಖ ಒರೆಸಿ ಸಮಾಧಾನ ಮಾಡಿದರು ಸರಿಕಾಣಲಿಲ್ಲ. drops ಏನಾದರು ಇದೆಯೇ ನೋಡಿದೆ ಸಿಗಲಿಲ್ಲ. ಮಗುವನ್ನು ಸುಮ್ಮನಿರಿಸಲು ನನ್ನ ಹಬ್ಬಿ ಕೂಡಾ ಮಾಡಿದ ಪ್ರಯತ್ನ ವಿಫ಼ಲವಾಯಿತು .
ಸಂಜೆ ೭ ಗಂಟೆಗೆ ಅವರಮ್ಮ ಬಂದರು. ಅಮ್ಮನನ್ನು ಕಾಣುತ್ತಲೇ ಗಪಚುಪ್. ಅಮ್ಮನ ಭುಜವೇರಿ ಅಳುವು ನಿಂತು ನಗು ಮೂಡಿ ಅವಳನ್ನು ಸಮಾಧಾನ ಮಾಡಲು ಸಲ್ಲದ ಮಂಗಚೇಷ್ಟೆಮಾಡುತ್ತ ನಿಂತವರತ್ತ ನೆತ್ತನೋಟ ನೆಟ್ಟಂತೆಯೇ ನೋಡುತ್ತಾ ಮನೆ ಸೇರಿದಳು . ಟಾಟಾ ಎಂದು ಕೈಯ್ಯಾಡಿಸಿ ಯಥಾಸ್ಥಿತಿಗೆ ಮರಳಲೆತ್ನಿಸಿದೆವು . ಮತ್ತೆ ಮತ್ತೆ ಅವಳ ಮುಖ ಕಣ್ಣ ಮುಂದೆ ಬರುತ್ತಿತ್ತು. ರಾತ್ರೆಯೆಲ್ಲ ಅವಳದೇ ಮಾತು ಕನಸು. ಅರ್ಧ ಗಂಟೆ ಅವಳನ್ನು ಸರಿಯಾಗಿ ನೋಡಲಿಕ್ಕೆ ಆಗಿಲ್ಲ. ಆದರೆ ಅಮ್ಮ ಬಂದಾಕ್ಷಣ ಅವಳ ಮನಸ್ಸು ಹೇಗೆ secure feel ಮಾಡಿಕೊಂಡಿತು.. ಅಮ್ಮನ ಬರವು ಹೇಗೆ ತಿಳಿಯಿತು. ಎಲ್ಲ ದುಗುಡ ಅಮ್ಮನನ್ನು ಕಂಡಾಗ ಹೇಗೆ ದೂರವಾಯಿತು.. ಈ ಅಮ್ಮ ಮಗುವಿನ ಬಂಧ ವರ್ಣನಾಮಯ .. ಎಷ್ಟು ವರ್ಣಿಸಿದರೂ ಸಾಲದು .. ನನಗೂ... ಒಮ್ಮೆ ಮಗುವಂತೆ ಅಮ್ಮನ ಮಡಿಲು ಸೇರುವ ತವಕವಾಯಿತು ....
- ಕಾವ್ಯಮಯಿ
No comments:
Post a Comment