ಪ್ರತಿಯೊಬ್ಬ ಮನುಷ್ಯನ ಜೀವನವೂ ವಿಷಯ ಘಟನೆಗಳ ಸರಪಣಿ. ಪ್ರತಿಕ್ಷಣ ಒಂದಿಲ್ಲೊಂದು ಘಟಿಸುತ್ತಲೇ ಇರುತ್ತದೆ. ಹಲವು ಸಾಮಾನ್ಯ ಕ್ರಮವಾದರೆ ಇನ್ನು ಹಲವು ಅನಿರೀಕ್ಷಿತ , ಅಸಾಮಾನ್ಯ , ಊಹೆಗೆ ನಿಲುಕದ್ದು. ಬರೆಯಲು ಹೋದರೆ ಎಲ್ಲರ ಬದುಕೂ ಕಾದಂಬರಿಯೇ . ವ್ಯಕ್ತಿಯ ಜೀವನದ ಹಳೆಯ ವಿದ್ಯಮಾನವೆಲ್ಲವನ್ನು ಜೊತೆಗೂಡಿದರೆ ಆತನು ಯಾವ ಸಿನೆಮಾದ ನಾಯಕನಿಗೂ ಸರಿಸಮನಾಗಿ ನಿಲ್ಲುತ್ತಾನೆ . ಯಾಕೆಂದರೆ ಆತನು ನಿಜಾರ್ಥದಲ್ಲಿ ಜೀವಿಸಿರುತ್ತಾನೆ. ಸಂದರ್ಭಕ್ಕೆ ತಕ್ಕಂತೆ ಕಾಯಕಗಳು ನಡೆಯುತ್ತಾ ಸಾಗಿರುತ್ತವೆ.
ಅಹಿತಕರವಾದ ಯಾವುದಾದರು ಕಾರ್ಯ ನಡೆದರೆ ಅವನಿಗೆ ಹಾಗಾಗಬಾರದಿತ್ತು , ಮೊನ್ನೆಯಷ್ಟೇ ಮದುವೆಯಾಗಿತ್ತು, ನಿನ್ನೆಯಷ್ಟೇ ಹೊಸ ಕೆಲಸಕ್ಕೆ ಸೇರಿಕೊಂಡ , ಅವಳಿಗೆ ಹೆತ್ತ ಮಗುವ ಮುಖ ನೋಡುವ ಭಾಗ್ಯ ಇರಲಿಲ್ಲ .... ರಾಯರು ಕಳೆದ ವಾರ ತಾನೆ ಷಷ್ಟಭ್ಯ ಮುಗಿಸಿದ್ದರು ... ಈಗ ಹೀಗಾಯಿತು ಎನ್ನುತ್ತಾ ಬಳಲಿದ ಮಂದಿಯ ಬಗ್ಗೆ ಮಾತಾಡುತ್ತಾರೆ. ಅವರ ಜೀವನ ನೋಡಿ ದುಃಖಿಸುತ್ತಾರೆ.. ಅವರ ಒಳ್ಳೆಯತನವನ್ನು ಹೊಗಳುತ್ತಾರೆ. ಬದುಕು ಎಲ್ಲಾರದೂ ಇಷ್ಟೇ ಕಣ್ರೀ . ನಾಳೆ ನಾವು ಸತ್ರೂ ಅಷ್ಟೇ . ಎಲ್ಲರೂ ನಾಯಕರಾಗಿರೋ ಈ ಲೈಫ್ ಅನ್ನೋ ಕಾದಂಬರಿ ಅಷ್ಟೇ ಚೆನ್ನಾಗಿ ಪಾಠಾನೂ ಕಲಿಸುತ್ತೆ ... ವಿಭಿನ್ನವಾಗಿರೋ ಈ ಲೋಕದಲ್ಲಿ ನನ್ನೊಂದಿಗೆ ನಡೆಯೋ ಘಟನೆಗಳನ್ನು ಬರಹಕ್ಕೆ ಇಳಿಸಬೇಕೆಂಬ ಸಣ್ಣ ಪ್ರಯತ್ನ ನನ್ನದು . ಇವು ನನ್ನ ಅನಿಸಿಕೆಗಳಾಗಿರುತ್ತವೆಯೇ ಹೊರತು ತೀರ್ಮಾನವಲ್ಲ... ಯಾಕೆಂದರೆ ಪ್ರತಿಯೊಬ್ಬನೂ ಯೋಚನೆ ಮಾಡುವ ದಿಕ್ಕು ಬೇರೆ ಬೇರೆ ಇರುತ್ತದೆ.
ಹಾಗಾಗಿಯೇ ಈ ಅಂಕಣಕ್ಕೆ 'ಕನ್ನಡಕದಿಂದ ಕಂಡಿದ್ದು' ಎಂದು ಹೆಸರು ನೀಡಿದ್ದು .ನನಗೆ ನನ್ನ ಕಣ್ಣು ( ಮನಸ್ಸು) ಏನು ಕಾಣಿಸುತ್ತದೆ ಅದನ್ನೇ ತಾನೆ ಬರೆಯಲು ಸಾಧ್ಯ..